ಮೌನಯುದ್ದ
ಕನಸುಗಳ ಹಸಿ ಹಸಿವಿಗೆ
ಛಲವೇ ಕೂಡಿಟ್ಟ ಆಹಾರ
ಗುರಿಯೊಂದು ಕಣ್ಣ ಸೆಳೆಯುತ್ತಿದೆ
ಅದೇ ಈಗ ಮನಸಿನ ಆಹಾಕಾರ||
ಸೋಲುಗಳು ಹೊಂಚು ಹಾಕಿವೆ
ಛಲವ ಕದ್ದು ಇಂಚಿಂಚು ಭಕ್ಷಿಸಲು
ಮನದೊಳಗೆ ಕಂಪನ ಆತಂಕ
ನಂಬಿಕೆಯ ಸೌಧ ಕೆಡವಲು ||
ಬತ್ತಲಾದ ಬಯಲಿಗೇನು ಗೊತ್ತು
ಕೆಂಪು ರಕ್ತದ ಗತ್ತು ಮತ್ತು
ಯಾರೋ ನೆಟ್ಟ ಮುಳ್ಳು ಕಲ್ಲುಗಳು
ಹೃದಯಕೆ ಎಲ್ಲವೂ ಗೊತ್ತು ||
ಸ್ವಾರ್ಥಗಳು ಮೂಢ ಕಪ್ಪು ಮನಗಳು
ಕತ್ತಲಾಗಿಸಿವೆ ಎತ್ತಲೂ ಸುತ್ತಲೂ
ಕತ್ತಲನ್ನೇ ನುಂಗುವಂತಹ ದಾಹ ಮೋಹ
ದೃಷ್ಟಿ ಮಾತ್ರ ಆ ಗುರಿಯ ಮುತ್ತಲು ||
ಅಗೋ ಅದೊಂದು ಗುರಿ ಹತ್ತಿರ
ಬಾಚಿಕೊಳ್ಳುವಷ್ಟು ಇನ್ನೂ ಹತ್ತಿರ
ಆನಂದಬಾಷ್ಪದ ತಾಕತ್ತು ಕಿಮ್ಮತ್ತು
ನೆತ್ತರ ನೋವಿಗಿಂತ ಎತ್ತರ ಬಲು ಎತ್ತರ..||
=> ವೆಂಕಟೇಶ ಚಾಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ