ಪುಟಗಳು

▼

hanigavanagalu ಹನಿಗವನಗಳು

 ನನ್ನ ಬಗ್ಗೆ | photo gallery | ಸಂದ ಪ್ರಶಸ್ತಿಗಳು | ಸನ್ಮಾನಗಳು | ಕವಿಗೋಷ್ಠಿಗಳು | ಹನಿಗವನಗಳು | ಮಕ್ಕಳ ಕಥೆಗಳು | ಮಕ್ಕಳ ಕವನಗಳು | ಕವಿತೆಗಳು | ಕವನಗಳು | ಗಜಲ್ ಗಳು | ಲೇಖನಗಳು | ಹಾಸ್ಯ ಲೇಖನಗಳು | ಕಥೆಗಳು | ಪುಟಾಣಿ ಪ್ರಾಸಗಳು | ಮಕ್ಕಳ ಕಥಾಕವನಗಳು | ಶಾಲೆ ಮತ್ತು ನಾನು | ತರಬೇತಿಗಳು ಮತ್ತು ಇತರೆ | ಸಾಮಾಜಿಕ ಸೇವಾಕಾರ್ಯಗಳು



05) ಬೇವು ಬೆಲ್ಲ 

 ಸೋಲು ಗೆಲುವಿನಂತೆ
 ಜೀವನದಲ್ಲೂ ಇರಬೇಕು 
ಬೇವು ಬೆಲ್ಲ ..;
ಯಾವುದೂ ಶಾಶ್ವತವಲ್ಲ 
ಸುಖ ದುಃಖಗಳಂತೆ 
ಇಂದು  ಇದ್ದದ್ದು  ನಾಳೆ ಇಲ್ಲ.‌.||


 04) ಯುಗಾದಿ 

ಬೇವು ಬೆಲ್ಲ ತಿಂದು 
ಸಂತೋಷದಿಂದ ಆಚರಿಸಿ 
ವರ್ಷದ ಆದಿ ಯುಗಾದಿ..;
ಹೊಸ ಹನಿ ಬರೆದು 
ಓದುಗನ ಎದೆಗೆ ಇಳಿದು
ನಗಿಸಿ ನೀವೂ ನಗಾಡಿ..||

03)  ಗೋಷ್ಠಿ

ಬಹುಪಾಲು
ಪ್ರೇಕ್ಷಕರಿಲ್ಲದ ಕವಿಗೋಷ್ಠಿಯಲ್ಲಿ 
ಕವಿಗಳದ್ದೇ ಕಾರುಬಾರು..;
ಪ್ರೇಕ್ಷಕರಿಂದ ತುಂಬಿ ಹೋಗಿತ್ತು 
ಕವಿಗೋಷ್ಠಿಯ ಪಕ್ಕದಲ್ಲಿದ್ದ
ಬಾರು..!!


02) ಖುಷಿ

ಗಂಡನಿಗೆ ಬೇಕಿಲ್ಲ 
ಬೆಳ್ಳಿ ಬಂಗಾರ 
ವಜ್ರ ವೈಡೂರ್ಯ..;
ಮುಖದಲ್ಲಿ ಅಂದು ಖುಷಿ 
ಮನೆಯಲ್ಲಿ ನಗುತ್ತಿದ್ದರೆ 
ತನ್ನ ಬಾರ್ಯ..!!

01) ಯುದ್ಧ

ಬುದ್ದಿವಂತರು ಇದ್ದರೂ
ಜಗತ್ತು ನಲಗುತಿದೆ
ಕಾರಣವೇ ಯುದ್ದ.;
ಹಲವು ಧರ್ಮಗಳಿದ್ದರೂ
ಏನಿದೆ ಫಲ
ಮತ್ತೆ ಬರಬೇಕೆ ಬುದ್ದ..!!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ