ಭಾನುವಾರ, ಮಾರ್ಚ್ 15, 2020

ಬಂತು ಯುಗಾದಿ

ನನ್ನ ಬಗ್ಗೆ | photo gallery | ಸಂದ ಪ್ರಶಸ್ತಿಗಳು | ಸನ್ಮಾನಗಳು | ಕವಿಗೋಷ್ಠಿಗಳು | ಹನಿಗವನಗಳು | ಮಕ್ಕಳ ಕಥೆಗಳು | ಮಕ್ಕಳ ಕವನಗಳು | ಕವಿತೆಗಳು | ಕವನಗಳು | ಗಜಲ್ ಗಳು | ಲೇಖನಗಳು | ಹಾಸ್ಯ ಲೇಖನಗಳು | ಕಥೆಗಳು | ಪುಟಾಣಿ ಪ್ರಾಸಗಳು | ಮಕ್ಕಳ ಕಥಾಕವನಗಳು | ಶಾಲೆ ಮತ್ತು ನಾನು | ತರಬೇತಿಗಳು ಮತ್ತು ಇತರೆ | ಸಾಮಾಜಿಕ ಸೇವಾಕಾರ್ಯಗಳು

    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ






ಬಂತು ಯುಗಾದಿ

ಯುಗಾದಿ ಬಂತು ಹರುಷ ತಂತು
ಹೊಸ ಬದುಕಿನ ಹೊಸಗಾನಕೆ
ನಿಸರ್ಗ ಚೆಲುವ ಹೊಮ್ಮಿ ಬಂತು
ಹೊಸ ವರುಷದ ಹೊಸ ಸೃಷ್ಟಿಗೆ ||

ಸೃಷ್ಟಿ ಸೊಬಗು ಮನ ಸೆಳೆದಿದೆ
ಚಿಗುರು ಮೂಡಿ ಹಸಿರು ಚಿಮ್ಮಿದೆ
ಮಾವು ಬೇವು ಹೂವು ಕಾಯಿ
ಯುಗಾದಿ ಮಂತ್ರ ಜಪಿಸುತಿವೆ ||

ಮಾವು ಬೇವು ಒಂದುಗೂಡಿ
ಹೊಸ ಬದುಕಿಗೆ ಮೋಡಿ ಮಾಡಿವೆ
ಸುಖ ದುಃಖ ದ ಸಮ ಪ್ರಸಾದ
ಪ್ರತಿಜೀವಿಗೂ ಯುಗಾದಿ ನೀಡಿದೆ ||

ಮೊದಲ ಮಳೆಗೆ ಚಿಮ್ಮಿ ಬಂತು
ಎಲ್ಲೆಡೆಯೂ ಹಸಿರು ತೋರಣ
ಚೈತ್ರಗಾನ ಹಾಡಿ ನಲಿಯಲಿಂದು
ಕೋಗಿಲೆಗೆ ದ್ವನಿಯು ಮೂಡಿದೆ ||

ಬಾ ಯುಗಾದಿ ಬವಣೆ ನೀಗು
ಬರಡು ನೆಲದಿ ಹಸಿರ ನೀಡು
ಮೇಲು ಕೀಳು ಎಲ್ಲ ಕಳೆದು
ಸುಖ ದುಃಖ ಸಮರ ಸಾರು ||

ಸ್ವಾರ್ಥಿ ಮನುಜ ಇಳೆಯ ತನುಜ
ಅರಿಯಲಿಂದು ಪೃಥ್ವಿ ಮಹಿಮೆ
ಆಯುರಾರೋಗ್ಯ ಎಲ್ಲ ಪಡೆದು
ಅರಿವು ಜಗದಿ ಯುಗಾದಿ ತರಲಿ ||

=> ವೆಂಕಟೇಶ ಚಾಗಿ
ಲಿಂಗಸುಗೂರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ